Saturday, April 4, 2009

ಬಾ ಮಳೆಯೇ ಬಾ..........................

ಮಳೆ ಅಂದಾಕ್ಷಣ , ಒಂದು ನಿಮಿಷ ಮನದಲ್ಲಿ ಅರಳುವ ಹನಿ ನಮ್ಮನು ಬೇರೆ ಯಾವುದೊ ಲೋಕಕ್ಕೆ ಕರೆದುಕೊಂಡು ಹೋಗುತ್ಹದ್ದೆ, ಮುಸ್ಸಂಜೆ ಒತ್ಹಿನಲ್ಲಿ ಚೆಟಪಟ ಸದ್ದು ಮಾಡುತ ಮಣ್ಣಿನೊಂದಿಗೆ ಬೆರತು ಬರುವ ಮಣ್ಣಿನ ವಾಸನೆ ಬಾಲ್ಯದ ಸವಿ ನೆನಪನ್ನು ಕಣ್ಮುಂದೆ ತರುತದ್ದೆ, ಕೆಟಕಿಯ ಗಾಜಿನ ಮೇಲೆ ಸುರಿಯುತ ಮನೆಯೊಳಗೆ ಇಣುಕುವ ಮಳೆ ,ಮಳೆಗೆ ಸಂಗಾತಿಯಾಗುವ ತಂಪು ಗಾಳಿ ಭುವಿಯಲ್ಲೆ ಸ್ವರ್ಗದ ಅನುಭವವನ್ನು ತರುವುದರಲ್ಲಿ ಸಂಶಯವಿಲ್ಲ .........................................................
ಮಳೆನೆನಪು ತರುವ ಉಲ್ಲಾಸ ವರ್ಣನೆಗೆ ನಿಲುಕದ್ದು, ಮೊದಲ ಮಳೆಗೆ ಮೈ ಒಡ್ಡಿ ಕುಣಿದರೆ ಅದಕಿಂತಲೂ ಖುಷಿ ತರುವ ಸಂಗತಿ ಇನೊಂದಿಲ್ಲ ,
ಮುಂಜಾವಿನಲಿ ಮಳೆ ಬಂದರೆ ಹಾಸಿಗೆ ಇಂದ ಮೇಲೇಳುವುದು ಎಂತವರಿಗೂ ಕಷ್ಟದ ವಿಷಯ ಕಣ್ಣು ಉಜ್ಜಿಕೊಂಡು ಮೇಲೆದ್ರು ಕೆಲಸಕ್ಕೆ ಹೋಗೋದಕ್ಕೆ ಬದಲು ಮಳೆ ಯಲ್ಲಿ ನೆನಯಬೇಕು ಎಂಬುವುದು ನನ್ನ ಸುಪ್ತ ಬಯಕೆ.....................
ಮಳೆ ಎಂತವರನ್ನು ಕವಿಯಾಗಿಸಬಲ್ಲದು ಅದಕ್ಕೆ ಅಲ್ಲವಾ ಅಸ್ಟೊಂದು ಮಳೆ ಹಾಡುಗಳು ಇರುವುದು ,ಶಾಲೆಗೆ ಹೋಗಿ ಬರುವಾಗ ಬರುವ ಮಳೆ ಯ ಜೊತೆ ಆಡುತ್ಹ ಮಕ್ಕಳ ಸಂಭ್ರಮ ಅಸ್ಟೂ ಇಷ್ಟೂಅಂತು ಅಲ್ಲ ,ನೆನದ ತಲೆ ವಣಗಿಸಲು ತಾಯಂದಿರು ಪಡುವ ಕಷ್ಟವು ಆಸ್ಟೋಇಷ್ಟೂ ಅಲ್ಲ ! ಪೇಪರ್ ದೋಣಿ ಬಿಡುವುದು ,ದೋಣಿ ಎಷ್ಟು ದೂರ ಸಾಗಬಹುದು ಎಂದು ನೋಡುವುದು ಎಲ್ಲರ ಬಾಲ್ಯದ ಸವಿ ನೆನಪುಗಳಲ್ಲಿ ಒಂದು !

3 comments:

  1. i could not read a thing..but the picture was awesome and well captured....a solitary flower holding a dewdrop.

    ReplyDelete
  2. hi thanks "just call me 'A'" credit for that awesome snap must go to Nature Ramblings from Ashland Oregon blog........
    and this is about rain ,its in kannada...

    ReplyDelete
  3. Good one....

    Rain: One of my favorite.....

    ಮಳೆ :
    ಬೆಳಗಿನ ಜಾವ - ಬೆಳ್ಳಿ ಮೋಡ - ಕವಿದ ಬೆಳ್ಳಿ ಮೋಡದಿಂದ ಕದ್ದು ಕದ್ದು ನೋಡೋ ತುಂಟ ನಯನಗಳ ಸೂರ್ಯ.

    - ಮೋಡವನ್ನು ಛೇದಿಸಿ ಸುವರ್ಣ ಬೆಳಕನ್ನು ಭೂಮಿಯ ಮೇಲೆ ಚೆಲ್ಲಿವ ಸೂರ್ಯ.....
    - ತನ್ನೊಳಗೆ ಅಡಗಿರುವ ತುಂಬು ಹೃದಯದ ಪ್ರೀತಿಯನ್ನು ಭೂಮಿಯ ಮೇಲೆ ಧಾರೆಯೆರೆಯುತ್ತಾ, ಕಡಲನ್ನು ಸೇರಿ, ಮಹಾ ಸಾಗರದ ಅಂತರಾಳದಲ್ಲಿ ಬೆರೆವ ಪುಟ್ಟ ಪುಟ್ಟ ಮಳೆ ಹನಿ....
    - ಸಮುದ್ರ ದಡದ ಕಪ್ಪೆ ಚಿಪ್ಪೆಯಲ್ಲಿರಿವ ಮುತ್ತಿಗಿಂತ ಪಳ ಪಳ ಹೊಳೆಯುವ ಹಸಿರು ಎಲೆಗಳ ಮೇಲಿನ ಸ್ವಾತಿಮುತ್ತಿನ ಮಳೆ ಹನಿ.....
    - ನಿನ್ನ ಮನಸಿನ ಕಣ್ಣೀರನ್ನು ತನ್ನ ಒಡಲಲ್ಲಿ ಮುಚ್ಚಿ ಕೊಳ್ಳುವ ಸ್ನೇಹಿತೆ ಮಳೆ ಹನಿ.....
    - ಬರವಣೆಗೆ ಎಟುಕದ ಅನಂತಾನಂತ ಮನಸಿನ ಸೂಕ್ಷ್ಮ ಭಾವನೆ ಮಳೆ ಹನಿ.....

    ReplyDelete