Saturday, April 4, 2009

ಬಾ ಮಳೆಯೇ ಬಾ..........................

ಮಳೆ ಅಂದಾಕ್ಷಣ , ಒಂದು ನಿಮಿಷ ಮನದಲ್ಲಿ ಅರಳುವ ಹನಿ ನಮ್ಮನು ಬೇರೆ ಯಾವುದೊ ಲೋಕಕ್ಕೆ ಕರೆದುಕೊಂಡು ಹೋಗುತ್ಹದ್ದೆ, ಮುಸ್ಸಂಜೆ ಒತ್ಹಿನಲ್ಲಿ ಚೆಟಪಟ ಸದ್ದು ಮಾಡುತ ಮಣ್ಣಿನೊಂದಿಗೆ ಬೆರತು ಬರುವ ಮಣ್ಣಿನ ವಾಸನೆ ಬಾಲ್ಯದ ಸವಿ ನೆನಪನ್ನು ಕಣ್ಮುಂದೆ ತರುತದ್ದೆ, ಕೆಟಕಿಯ ಗಾಜಿನ ಮೇಲೆ ಸುರಿಯುತ ಮನೆಯೊಳಗೆ ಇಣುಕುವ ಮಳೆ ,ಮಳೆಗೆ ಸಂಗಾತಿಯಾಗುವ ತಂಪು ಗಾಳಿ ಭುವಿಯಲ್ಲೆ ಸ್ವರ್ಗದ ಅನುಭವವನ್ನು ತರುವುದರಲ್ಲಿ ಸಂಶಯವಿಲ್ಲ .........................................................
ಮಳೆನೆನಪು ತರುವ ಉಲ್ಲಾಸ ವರ್ಣನೆಗೆ ನಿಲುಕದ್ದು, ಮೊದಲ ಮಳೆಗೆ ಮೈ ಒಡ್ಡಿ ಕುಣಿದರೆ ಅದಕಿಂತಲೂ ಖುಷಿ ತರುವ ಸಂಗತಿ ಇನೊಂದಿಲ್ಲ ,
ಮುಂಜಾವಿನಲಿ ಮಳೆ ಬಂದರೆ ಹಾಸಿಗೆ ಇಂದ ಮೇಲೇಳುವುದು ಎಂತವರಿಗೂ ಕಷ್ಟದ ವಿಷಯ ಕಣ್ಣು ಉಜ್ಜಿಕೊಂಡು ಮೇಲೆದ್ರು ಕೆಲಸಕ್ಕೆ ಹೋಗೋದಕ್ಕೆ ಬದಲು ಮಳೆ ಯಲ್ಲಿ ನೆನಯಬೇಕು ಎಂಬುವುದು ನನ್ನ ಸುಪ್ತ ಬಯಕೆ.....................
ಮಳೆ ಎಂತವರನ್ನು ಕವಿಯಾಗಿಸಬಲ್ಲದು ಅದಕ್ಕೆ ಅಲ್ಲವಾ ಅಸ್ಟೊಂದು ಮಳೆ ಹಾಡುಗಳು ಇರುವುದು ,ಶಾಲೆಗೆ ಹೋಗಿ ಬರುವಾಗ ಬರುವ ಮಳೆ ಯ ಜೊತೆ ಆಡುತ್ಹ ಮಕ್ಕಳ ಸಂಭ್ರಮ ಅಸ್ಟೂ ಇಷ್ಟೂಅಂತು ಅಲ್ಲ ,ನೆನದ ತಲೆ ವಣಗಿಸಲು ತಾಯಂದಿರು ಪಡುವ ಕಷ್ಟವು ಆಸ್ಟೋಇಷ್ಟೂ ಅಲ್ಲ ! ಪೇಪರ್ ದೋಣಿ ಬಿಡುವುದು ,ದೋಣಿ ಎಷ್ಟು ದೂರ ಸಾಗಬಹುದು ಎಂದು ನೋಡುವುದು ಎಲ್ಲರ ಬಾಲ್ಯದ ಸವಿ ನೆನಪುಗಳಲ್ಲಿ ಒಂದು !